ಧರ್ಮ ಮತ್ತು ಸಮಾಜದ ನಡುವಿನ ಪರಸ್ಪರ ಸಂಬಂಧವನ್ನು ಚಿಂತನೆಯ ಒರೆಗಚ್ಚುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ಸಮಾಜದೊಳಗೆ ಅರಳುವ ಧರ್ಮ ಸಮಾಜದ ಚೌಕಟ್ಟನ್ನು, ಅಂದರೆ ಅದರ ಸಂಯೋಜನೆಯನ್ನು ಮೀರಿ ಹೋಗುವುದಕ್ಕೆ. ಸಾಧ್ಯವಿಲ್ಲ ಎಂದು ಪ್ರತಿಪಾದಿಸುತ್ತಿದ್ದೇನೆ. ಅಂದರೆ ಧರ್ಮಗಳು ಸಾಮಾಜಿಕ ಸೃಷ್ಟಿ. ಧರ್ಮ ಸಮಾಜವೆಂಬ ವ್ಯವಸ್ಥೆಯ ಒಂದು ಭಾಗವಷ್ಟೇ. ಒಂದು ಭಾಗ ವ್ಯವಸ್ಥೆಯ ಮೇಲೆ ತೀವ್ರವಾದ ಪ್ರಭಾವ ಬೀರಬಹುದು. ಆದರೆ ಭಾಗವೊಂದೇ ವ್ಯವಸ್ಥೆಯಾಗುವುದಕ್ಕೆ ಸಾಧ್ಯವಿಲ್ಲ. ಈ ಪ್ರಯತ್ನವನ್ನು ನಾನು ಎರಡು ಅಥವ ಮೂರು ಲೇಖನಗಳಲ್ಲಿ ಮಾಡುತ್ತಿದ್ದು, ಮೊದಲನೇ ಭಾಗವಾದ ಈ ಲೇಖದಲ್ಲಿ ಸಾಮಾಜಿಕ ಸೃಷ್ಟಿಯ ನೆಲೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ.
ಸಮಾಜವೆಂಬ ವಿಚಾರ (idea) ಮತ್ತು ಅದರ ಅಸ್ತಿತ್ವದ(existence) ಬಗ್ಗೆಯೇ ಜಿಜ್ನಾಸೆಗಳಿವೆ. ಕೆಲವರಿಗೆ ಸಮಾಜವೆಂಬುದು ವಸ್ತುನಿಷ್ಟವಾದ ಸತ್ಯವಾಗಿ (objective truth) ಗೋಚರಿಸಬಹುದು. ಪ್ರೆಂಚ್ ನ ಶ್ರೇಷ್ಟ ಅಭಿಜಾತ ಸಮಾಜಶಾಸ್ತ್ರಜ್ನ ಎಮಿಲಿ ದರ್ಖೈಮ್(Emile Durkheim) ರವರಿಗೆ ಸಮಾಜವು ತನ್ನದೇ ಅಸ್ತಿತ್ವವನ್ನ್ಜು ಹೊಂದಿದೆ. ಅವರು ಸಮಾಜವನ್ನು ಈ ಕಾರಣದಿಂದಲೇ sui generis ಎಂದು ಕರೆದರು. ಮತ್ತು ಸಮಾಜ ವ್ಯಕಿಗಳಿಂದ ಸ್ವತಂತ್ರವಾದುದು, ವ್ಯಕ್ತಿಗಳಿಂದಲೇ ಸಮಾಜ ಸೃಷ್ಟಿಯಾಗಿದ್ದರೂ ಅವರ ಮೇಲೆ ನಿರ್ಬಂಧವನ್ನೇರುವ ಶಕ್ತಿ ಹೊಂದಿದೆ ಎಂದು ವಾದಿಸಿದರು. ಆದರೆ ಈ ಪ್ರತಿಪಾದನೆಗೆ ಸಂಪೂರ್ಣವಾದ ವಿರುದ್ಧ ನೆಲೆಯಲ್ಲಿ ಹಲವು ಸಮಾಜಶಾಸ್ತ್ರಜ್ನರು ತಮ್ಮ ದೃಷ್ಟಿಕೋನಗಳನ್ನು ಮಂಡಿಸಿದ್ದಾರೆ. ಸಮಾಜವನ್ನು ಶುದ್ಧ ಮೂರ್ತ ವಾಸ್ತವದ ನೆಲೆಯಲ್ಲಿ ವ್ಯಾಖ್ಯಾನಿಸಲು ಅವರು ನಿರಾಕರಿಸಿದ್ದಾರೆ. ಅವರ ಪ್ರಕಾರ ಸಮಾಜವು ವ್ಯಕ್ತಿಗಳ ಸಾಮಾಜಿಕ ಕ್ರಿಯೆಯಿಂದ (social action) ಸೃಷ್ಟಿಸಲಪಡುತ್ತದೆ ಮತ್ತು ಮರುಸೃಷ್ಟಿಸಲ್ಪಡುತ್ತದೆ (society is being produced and reproduced by the acts of individuals or actors).
ಕ್ರಿಯೆಯೆಂಬುದು ಸಂಭವಿಸದೇ ಸಮಾಜ ಮತ್ತು ಸಾಮಾಜಿಕವಾದ ಯಾವ ಸಂಗತಿಗಳನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಸಮಾಜದ ಅಸ್ತಿತ್ವವು ವ್ಯಕ್ತಿಗಳ ಕ್ರಿಯೆಗಳನ್ನಾಧರಿಸಿದೆ. ಕ್ರಿಯೆಯಲ್ಲಿ ತೊಡಗುವವರು ಪರಸ್ಪರರ ಬಗ್ಗೆ ಅರಿವಿರಬೇಕು, ಎದುರಿನ ವ್ಯಕ್ತಿಯ ಕ್ರಿಯೆಗೆ ವ್ಯಕ್ತಿಗತ ನೆಲೆಯಲ್ಲಿ ಅರ್ಥವನ್ನು (meaning on subjective premises) ನೀಡಬೇಕು, ಅರ್ಥದ (meaning) ಆಧಾರದ ಮೇಲೆಯೇ ಪ್ರತಿಕ್ರಿಯೆ (response) ಅವಲಂಬಿಸಿರುತ್ತದೆ. ಅರ್ಥವು ವ್ಯಕ್ತಿಗತ ನೆಲೆಯಾಧಾರಿತವಾಗಿರುವುದರಿಂದ ಅದು ವ್ಯಕ್ತಿಗಳಲ್ಲಿ ವಿವರಣೆಗೆ ಒಳಪಡುತ್ತದೆ. ಅರ್ಥವು, ಆದ್ದರಿಂದ, ಅರ್ಥೈಸುವಿಕೆಗೆ (interpretation) ಒಳಪಡುತ್ತದೆ. ಅರ್ಥವು ಈ ಕಾರಣದಿಂದ ಸಾಂಕೇತಿಕವಾಗುತ್ತದೆ.
Phenomenologyಯು ವಾದಿಸಿರುವ ಪ್ರಕಾರ ಅರಿವು (consciousness) ವ್ಯಕ್ತಿಗಳಲ್ಲಿ ಪ್ರಾಥಮಿಕವಾದ ಸಂಗತಿ. ಅರಿವಿನಿಂದಲೇ ವ್ಯಕ್ತಿಗೆ ಅನುಭವಗಳು (experience) ಸಾಧ್ಯವಾಗುತ್ತದೆ. ಅರಿವಿನಿಂದ ಕೂಡಿದ ಅನುಭವಗಳು(conscious experience) ಪ್ರತಿ ವ್ಯಕ್ತಿಯಲ್ಲಿ ಪ್ರಾಥಮಿಕವಾಗಿರುತ್ತವೆ. ಈ ಅರಿವು ಸದಾ ಉದ್ದೇಶಪೂರ್ವಕತೆಯನ್ನು (intentionality) ಹೊಂದಿರುತ್ತದೆ. ಅಂದರೆ ಅದು ಸದಾ ವಸ್ತು, ವ್ಯಕ್ತಿ, ವಿಚಾರ ಮತ್ತು ಇತರ ಸಂಗತಿಗಳಿಗೆ ಅಭಿಮುಖವಾಗಿ ಹರಿಯುತ್ತಿರುತ್ತದೆ. ಅರಿವು ಸದಾ ವಸ್ತುವೊಂದರ(ಗಳ) ಸುತ್ತ ಚಲಿಸುತ್ತದೆ. ಉದ್ದೇಶವಿರದ ಅರಿವನ್ನು ಅನುಭವಿಸುವುದಕ್ಕೆ ಸಾಧ್ಯವಿಲ್ಲ. ಅರಿವು ಶೂನ್ಯದಿಂದ ಕೂಡಿರುವುದಕ್ಕೆ ಸಾಧ್ಯವಿಲ್ಲ.
ಅರಿವು-ಅನುಭವಿನ ರಚನೆಯು ಹಲವು ಪ್ರಕಾರಗಳಿಂದ ಕೂಡಿದೆ. ಸಂವೇದನೆ, ಆಲೋಚನೆ, ಕಲ್ಪನೆ, ಭಾವನೆಗಳು, ದೇಹದ ಬಗೆಗಿನ ಅರಿವು, ಇಚ್ಛೆ ಮತ್ತು ಭಾಷೆಯೊಳಗೊಂಡ ಸಾಮಾಜಿಕ ಚಟುವಟಿಕೆಗಳು ಅರಿವು-ಅನುಭವದ ವಿಭಿನ್ನ ಪ್ರಕಾರಗಳು. ಸಮಯ, ಸ್ಥಳದ ಬಗೆಗಿನ ಎಚ್ಚರ, ನಮ್ಮ ಅನುಭವದ ಬಗಿಗಿನ ಪ್ರಜ್ನಾಪೂರ್ವಕವಾದ ಎಚ್ಚರ, ಸ್ವಯಂ (self) ಮತ್ತು ಪ್ರತಿ ದಿನದ ಚಟುವಟಿಕೆಗಳು ನಮ್ಮ ಅರಿವು-ಅನುಭವವನ್ನು ರೂಪಿಸುತ್ತವೆ. ಅಂದರೆ ನಮ್ಮ ನಿತ್ಯ ಜೀವನದಲ್ಲಿ ನಾವು ಹೊಂದಿರುವ ಅರಿವು-ಅನುಭವವು ನಾವು ಬದುಕುವ ಸಂದರ್ಭ-ಪರಿಸ್ಥಿತಿಗಳಿಂದಲೇ ರೂಪಿಸಲ್ಪಡುತ್ತವೆ.
ಮನುಷ್ಯರು ಹೊಂದಿರುವ ಅರಿವು ಅವರ ಮಿದುಳು-ನರ ಮಂಡಲ ವ್ಯವಸ್ಥೆಯ ಸಂಕೀರ್ಣತೆಯನ್ನು ಅವಲಂಬಿಸಿದೆ. ಮನುಶ್ಯನ ಅರಿವಿನ ರಚನೆಯನ್ನು ನರ ವ್ಯವಸ್ಥೆಯಲ್ಲಿ ಸಂಭಿಸುವ ರಾಸಾಯನಿಕ ಬದಲಾವಣೆಗಳ ಮುಖಾಂತರ ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು Neuro phenomenology ಎಂದು ಕರೆಯಬಹುದು. ನಮ್ಮ ಅನುಭವಕ್ಕೆ ಗೋಚರವಾಗುವ ವಾಸ್ತವವು (reality) ಇಂದ್ರೀಯಗಳಿಂದ ನಿರ್ದರಿಸಲ್ಪಡುತ್ತವೆ. ನಮಗೆ ಗೋಚರಿಸುವ ವಾಸ್ತವವು ತನ್ನದೇ ಸ್ವತಂತ್ರವಾದ ಅಸ್ತಿತ್ವವನ್ನು ಹೊಂದಿರಬಹುದು. ಉದಾಹರಣೆಗೆ ನಮ್ಮ ಮಿದುಳು ಗುರುತಿಸುವ ಬಣ್ಣಗಳು ಕಾಮನಬಿಲ್ಲಿನಲ್ಲಿರುವ ಏಳು ಬಣ್ಣಗಳಷ್ಟೇ. ಉಳಿದ ಪ್ರಕಾರಗಳು ಆ ಏಳು ಬಣ್ಣಗಳ ಮಿಶ್ರಣ ಮತ್ತು ಸಂಯೋಜನೆಯಿಂದ ಉದ್ಭವಿಸುತ್ತವೆ. ನಮ್ಮ ಮಿದುಳು ಗ್ರಹಿಸುವ ವಿಧಗಳಿಗಿಂತ ಹೆಚ್ಚು ಬಣ್ಣಗಳು ಅಸ್ತಿತ್ವದಲ್ಲಿರಬಹುದು.ಅವುಗಳಿಗೆ ನಾವು ಕುರುಡಾಗಿದ್ದೇವೆ. ಆದರಿಂದ ನಮ್ಮ ಅನುಭವಕ್ಕೆ ಸಿಗುವ ವಾಸ್ತವವೇ ನಿಜವಾದ ವಾಸ್ತವವಲ್ಲ. ಹಾಗೆಯೇ ಕತ್ತಲ್ಲಲ್ಲಿ ನಮಗೆ ಕಣ್ಣು ಕಾಣುವುದಿಲ್ಲ. ಆದರೆ ಕೆಲುವು ಜೀವಿಗಳಿಗೆ ರಾತ್ರಿಯಲ್ಲಿಯೂ ದೃಷ್ಟಿ ಸಾಧ್ಯವಾಗುತ್ತದೆ. ನಮ್ಮ ಮೆದುಳಿನ ರಚನೆ ನಮ್ಮ ಅರಿವನ್ನು ನಿರ್ಧರಿಸುತ್ತದೆ.
ಮನುಷ್ಯ ಸೃಷ್ಟಿಸುವ, ಕಲಿಯುವ ಸಂಗತಿಯು ಅವನ ಮಿದುಳು ಮತ್ತು ಅವನ ಸಾಂಘಿಕ ಜೀವನವನ್ನು (collective life) ಅವಲಂಬಿಸಿದೆ. ಸಾಂಘಿಕ ಜೀವನವೇ ಮನುಷ್ಯನ ಮನಸ್ಸು ಮತ್ತು ಅವನ ಸಂಸ್ಕೃತಿಯ ಬೆಳವಣಿಗೆಗೆ ಕಾರಣವಾಗಿದೆ. ಆದ್ದರಿಂದ ಎಲ್ಲಾ ವಿಚಾರಗಳು (ideas, ಅಮೂರ್ತ), ಉಪಕರಣಗಳು (ಭೌತಿಕ ಸ್ವರೂಪದ) ಮನುಷ್ಯನ ಈ ಸಾಂಘಿಕ ಜೀವನನ್ನು ಅವಲಂಬಿಸಿವೆ. ಈ ಸಾಂಘಿಕ ಜೀವನವೇ ಮನುಷ್ಯನ ಮಿದುಳಿನ ಮತ್ತಷ್ಟು ವಿಕಸನಕ್ಕೆ ಇರುವ ಅತ್ಯಾವಶ್ಯಕವಾದ ನೆಲೆಯಾಗಿದೆ. ಎಲ್ಲವೂ, ಅಂದರೆ ಧರ್ಮವೂ ಸೇರಿದಂತೆ, ಮನುಷ್ಯನ ಅರಿವು ಮತ್ತು ಮನಸ್ಸಿನ ಸೃಷ್ಟಿಯಷ್ಟೇ. ಸಾಂಘಿಕ ಜೀವನ ಇವೆಲ್ಲದಕ್ಕೆ ಊರುಗೋಲಾಗಿದೆ. ದೇವರು ಮತ್ತು ಧರ್ಮವೂ ಮನುಷ್ಯನ ಈ ಅಭೂತಪೂರ್ವ ಶಕ್ತಿಯ ಅಭಿವ್ಯಕ್ತಿಯಷ್ಟೇ. ಪ್ರಸಕ್ತ ಲೇಖನದಲ್ಲಿ ನಾನು ಪರಿಚಯಿಸಿರುವ ಈ ವಿವರಣೆಯನ್ನು ನೀವು ಸಾಮಾಜಿಕ ಸೃಷ್ಟಿಯ (social construction) ನೆಲೆಯೆಂದೇ ಪರಿಗಣಿಸಬಹುದು. ದೇವರು ಮತ್ತು ಧರ್ಮಗಳು ಈ ಸಾಮಾಜಿಕ ಸೃಷ್ಟಿಯ ನೆಲೆಗಳು ಮಾತ್ರ, ಅವುಗಳನ್ನು ಮೀರಿ ಸೃಷ್ಟಿಯಾಗಿರುವುದಕ್ಕೆ ಯಾವ ಆಧಾರಗಳೂ ಇಲ್ಲ.