ಭ್ರಷ್ಟಾಚಾರ ಮತ್ತು ಜಾತಿ ವ್ಯವಸ್ಥೆ
ಚಿತ್ರ ಕೃಪೆ: http://www.nowpublic.com/environment/hunger
ಅರವಿಂದ ಕೇಜ್ರಿವಾಲರ India Against Corruption ಕೇವಲ ಹಣವನ್ನು ನ್ಯಾಯಸಮ್ಮತವಲ್ಲದ ಮಾರ್ಗದಲ್ಲಿ ಪಡೆದು ಕೆಲಸ ಮಾಡಿಕೊಡುವುದನ್ನು ಮಾತ್ರ ಭ್ರಷ್ಟಾಚಾರವೆಂದು ಭಾವಿಸಿದಂತಿದೆ. ಸದ್ಯದ ಅವರ ಹೋರಾಟ ಕೇವಲ ಹಣದ ವ್ಯವಹಾರದ ಭ್ರಷ್ಟಾಚಾರಕ್ಕೆ ಸೀಮಿತವಾಗಿದೆ. ಆದರೆ ಭ್ರಷ್ಟಾಚಾರ ಮೂಲದಲ್ಲಿ ಅದೊಂದು ಮನಸ್ಥಿತಿ ಮನೋಭಾವನೆಗಳ ಗುಚ್ಛವಾಗಿದ್ದು, ನಮ್ಮ ಕ್ರಿಯೆಗಳಲ್ಲಿ ಪ್ರಕಟವಾಗುತ್ತದೆ . ಹಾಗೆಯೇ ಭ್ರಷ್ಟಾಚಾರವೆಂಬುದು ಉಳಿದ ಸಮಾಜಗಳಿಗೆ ಹೋಲಿಸಿದಾಗ ದಕ್ಷಿಣ ಏಷ್ಯಾದ ಸಮಾಜಗಳಲ್ಲಿ, ವಿಷೇಶವಾಗಿ ಭಾರತೀಯ ಸಮಾಜದಲ್ಲಿ ಅದರ ಬೇರುಗಳನ್ನು ವರ್ಣ- ಜಾತಿ ವ್ಯವಸ್ಥೆಯ ಮುಖಾಂತರವೇ ಅರ್ಥಮಾಡಿಕೊಳ್ಳುವುದು ಸಮಂಜಸವಾಗುತ್ತದೆ. ಏಕೆಂದರೆ ಹುಟ್ಟಿನ ಆಧಾರದ ಮೇಲೆ ವ್ಯಕ್ತಿಗಳನ್ನು ಗುಂಪುಗಳನ್ನಾಗಿ ವರ್ಗೀಕರಿಸುವ ಸಾವಿರಾರು ವರ್ಷದ ಜಾತಿಯ ಆಚರಣೆಯೇ ಪ್ರಾಥಮಿಕವಾದ ಭ್ರಷ್ಟಾಚಾರ. ಭೌತಿಕ ಪರಿಸರದ ಮಡಿಲಿನಲ್ಲಿ ಅರಳುವ ಸಮಾಜವೊಂದರ ಸದಸ್ಯರು ಹುಟ್ಟಿನ ಹಿನ್ನಲೆಯ ಆಧಾರದ ಮೇಲೆ ಪ್ರಭೇದಾತ್ಮಕ ಸ್ಥಾನ ಮತ್ತು ಅವಕಾಶಗಳನ್ನು ಪಡೆಯುವುದು ಮತ್ತು ಆ ಅವಕಾಶಗಳು ಮತ್ತು ಸ್ಥಾನಗಳು ನಿಕೃಷ್ಟವಾಗಿರುವುದು ಮೂಲಭೂತವಾದ ಭ್ರಷ್ಟಾಚಾರ. ಅಂತಹ ಭ್ರಷ್ಟಾಚಾರ ಸಮಾಜವೊಂದರ ಪರಿಕ್ರಮಕ್ಕೆ (order) ಮತ್ತು ಸಮತೋಲನಕ್ಕೆ (equilibrium) ಮಾರಕವಾದುದು. ಅಸಮಾನತೆಯ ವಿವಿಧ ಪ್ರಕಾರಗಳಿಂದ ಸೃಷ್ಟಿಯಾಗುವ ಹಸಿವು ಮತ್ತು ಹಸಿವಿನಿಂದ ಕಂಗೆಡುವ ಜನರು ಈ ರೂಕ್ಷ ಭ್ರಷ್ಟಾಚಾರದ ಬಲಿಪಶುಗಳೇ. ಇಂಥಹ ಭ್ರಷ್ಟಾಚಾರ ಸಹಸ್ರ ವರ್ಷಗಳಿಂದ ನಡೆದುಕೊಂಡು ಬಂದಿರುವುದರ ಪರಿಣಾಮವನ್ನು ಊಹಿಸಿಲಿಕ್ಕೂ ಸಾಧ್ಯವಿಲ್ಲ. ಜಾತಿ ವ್ಯವಸ್ಥೆ ಪೋಶಿಸುವ ಸ್ವಾರ್ಥ, ಅಂದರೆ ನಮ್ಮವರು, ನಮ್ಮವನು ಎಂಬ diffused emotionsಗಳು ಕ್ರಿಯೆಗಳಾಗಿ (actions) ರೂಪಾಂತರವಾಗುತ್ತವೆ. ಮತ್ತು ಅಂತಹ ಪ್ರಸರಿತ ಭಾವನೆಗಳಿಗೆ ವೈಚಾರಿಕ ಲೇಪನ ಸಿಕ್ಕಾಗ ಭ್ರಷ್ಟಾಚಾರ ಸಂಕೀರ್ಣವಾಗುತ್ತದೆ. ಇಲ್ಲಿ ಕುಟುಂಬ, ಊರು, ಪ್ರಾಂತ್ಯ ಮತ್ತು ಅರ್ಥೋ-ರಾಜಕೀಯ ವ್ಯವಸ್ಥೆ, ಧರ್ಮಗಳು ಈ ವರ್ಣ-ಜಾತಿಯ ಚೌಕ್ಕಟ್ಟಿನಲ್ಲಿಯೇ ಉರುಳಾಡುತ್ತವೆ.
ಜಾತಿ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ಉಲ್ಲೀಖನೀಯ ಸಮೂಹ ವರ್ತನೆಯನ್ನು ನಾವು ಕಾಣಬಹುದು (reference group behaviour).ಒಂದು ಜಾತಿಗೆ ಸೇರಿದ ನಾಯಕನೊಬ್ಬ ಮಂತ್ರಿ, ಮುಖ್ಯಮಂತ್ರಿಯಾಗಿ ನೆಡುಸುವ ಭ್ರಷ್ಟಾಚರ ಇತರೆ ಜಾತಿಗಳು ನಡೆಸುವ ಭ್ರಷ್ಟಾಚಾರಕ್ಕೆ ಪ್ರೇರಣಯಾಗಬಹುದು ಮತ್ತು ಅನುಕರಣೆಗೆ ಕಾರಣವಾಗಬಹುದು. ದೊಡ್ಡ ಪ್ರಮಾಣದಲ್ಲಿ ಲೂಟಿ ಹೊಡೆದರೂ, ವ್ಯವಸ್ಥೆಯ ಕಾನೂನಿಗೆ ಮಣ್ಣೆರೆಚುವ ಬಲಾಢ್ಯರಿಗೆ ಜಾತಿ ಮತ್ತು ಧರ್ಮದ ರಕ್ಷಣೆ ಸಿಕ್ಕುತ್ತದೆ. ಅವರ ಅನೀತಿಯುತ ಕ್ರಿಯೆಗಳಿಗೆ ಸಮರ್ಥನೆ ಸಿಗುತ್ತದೆ. ಅಲ್ಲಿಗೆ ಅಧಿಕಾರಕ್ಕಾಗಿ ನೆಡೆಯುವ ಪೈಪೋಟಿಯು ಜನಹಿತಕ್ಕಲ್ಲದೆ ಕೇವಲ ಸ್ವಾರ್ಥಕ್ಕಾಗಿ ಮಾರ್ಪಾಡಾಗುತ್ತದೆ ಮತ್ತು ಆ ಪೈಪೋಟಿಯು ಹೊರನೋಟಕ್ಕೆ ವೈಚಾರಿಕತೆಯ tone ಪಡೆದುಕೊಂಡು ಸಂಘಟಿತ ರೂಪ ಪಡೆದುಕೊಳ್ಳುತ್ತದೆ. ಸ್ವಾರ್ಥ ಮತ್ತು ಸಂಕುಚಿತವಾದ ಗುಂಪೊಂದರ ಹಿತಾಸಕ್ತಿಗಳ ಸಾಧನೆಗಾಗಿ ಬಳಕೆಯಾಗುವ ಅಧಿಕಾರ ದುಷ್ಟವು ಮತ್ತು ಪರಿಸರ ವಿರೋಧಿಯಾಗಬಹುದು
ಕೇವಲ ಪುಡಿಗಾಸಿಗೊಸ್ಕರ ಹಣಕ್ಕೆ ಕೈ ಒಡ್ಡುವ, ಕೇವಲ ರುಜತ್ವವಲ್ಲದ ಹಣಕೊಸ್ಕರ ನಡೆಯುವ ಭ್ರಷ್ಟಾಚಾರವನ್ನು ಹತ್ತಿಕುವುದು ಸುಲಭ. ಆದರೆ ಭ್ರಷ್ಟಾಚಾರವು ಜಾತಿ-ವರ್ಣ ವ್ಯವಸ್ಥೆಯ ಅಭಿವ್ಯಕ್ತಿಯಾದಾಗ ಅದನ್ನು ಸೋಲಿಸುವುದು ಸವಾಲಾಗುತ್ತದೆ. ಆಗ ಭ್ರಷ್ಟಾಚಾರದ ಬಗೆಗಿನ ನಮ್ಮ ವ್ಯಾಖ್ಯೆಯು ಸಮಗ್ರವಾಬೇಕಾಗುತ್ತದೆ ಮತ್ತು ವಿಶಾಲವಾಗಬೇಕಾಗುತ್ತದೆ.
No comments:
Post a Comment